ನಮ್ಮ ಬಗ್ಗೆ

ನಮ್ಮ ಬಗ್ಗೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಈ ಹಿಂದೆ ನಿರ್ವಹಿಸುತ್ತಿದ್ದ ಶಾಸನ ರಚನೆಯ ಕಾರ್ಯವನ್ನು ಸಂಸದೀಯ ವ್ಯವಹಾರಗಳ ಕಾರ್ಯದೊಂದಿಗೆ ಜೊತೆಗೂಡಿಸಿ 1996ರ ಜನೇವರಿ 22ರಂದು ರಾಜ್ಯ ಸರ್ಕಾರ ಸಚಿವಾಲಯದ ಸ್ವತಂತ್ರ ಇಲಾಖೆಯಾಗಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಹೊರಹೊಮ್ಮಿತು ಈ ಹೊಸ ಹಂಚಿಕೆಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಸಿಎ 1 ಎ ಆರ್ ಟಿ 96 ದಿನಾಂಕ: 22.01.1996ರಲ್ಲಿ ಆದೇಶಿಸಲಾಗಿದೆ.

ನಾನೇನು ಮಾಡುತ್ತೇನೆ.

          ಶಾಸನ ರಚನೆಯು ನಮ್ಮ ವ್ಯವಹಾರವಾಗಿರುತ್ತದೆ. ಪ್ರಾಸಂಗಿಕವಾಗಿ ಇದು ವಿಧೇಯಕಗಳ ಮಂಡನೆ, ಪರಿಗಣನೆ ಮತ್ತು ಅಂಗೀಕಾರದಲ್ಲಿ ವಿಧಾನಮಂಡಲದೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಅವು ವಿಧಾನಮಂಡಲದ ಅಧಿನಿಯಮವಾಗುವವರೆಗೂ ಅವಲೋಕಿಸುವುದು ಶಾಸನ ರಚನೆಯ ನಿಯಮಗಳು, ವಿನಿಯಮಗಳು ಮತ್ತು ಅಧಿಸೂಚನೆಗಳ ರೂಪದಲ್ಲಿ ಅಧೀನ ಶಾಸನ ರಚನೆಯನ್ನು ಒಳಗೊಳ್ಳುತ್ತದೆ. ನಾವು ಕಾನೂನುಗಳ ಕ್ರೋಢಿಕರಣವನ್ನು ಕಾಲಕಾಲಕ್ಕೆ ಅವುಗಳ ಪ್ರಕಟಣೆಯನ್ನು ಸಹ ಮಾಡಿಕೊಳ್ಳುವೆವು.

ಇತ್ತೀಚಿನ ನವೀಕರಣ​ : 21-11-2019 11:41 AM ಅನುಮೋದಕರು: Admin