ಅಭಿಪ್ರಾಯ / ಸಲಹೆಗಳು

ದೃಷ್ಟಿ ಮೂಲೋದ್ದೇಶಗಳು ಕಾರ್ಯಾಚರಣೆ

ಭವಿಷ್ಯತ್ ದೃಷ್ಟಿ, ಧ್ಯೇಯ, ಉದ್ದೇಶಗಳು ಮತ್ತು ಪ್ರಕಾರ್ಯಗಳು


ಭವಿಷ್ಯತ್ ದೃಷ್ಟಿ:
    ಸಂಸದೀಯ ವ್ಯವಹಾರಗಳು ಮತ್ತು ಭಾಷಾಂತರ ನಿರ್ದೇಶನಾಲಯವು ಸುಧಾರಿತ ಶಾಸನಗಳನ್ನು ಪ್ರಾರೂಪಿಸುವುದು ಮತ್ತು ಅಧಿನಿಯಮಗೊಳಿಸುವುದು ಹಾಗೂ ಉತ್ತಮ ಆಡಳಿತಕ್ಕಾಗಿ ಮತ್ತು ಭಾರತ ಹಾಗೂ ಕರ್ನಾಟಕ ಸರ್ಕಾರಕ್ಕೆ ಅಗತ್ಯವಾದ ಶಾಸನಗಳು ಕಾರ್ಯಕಾರಿ ಮತ್ತು ನ್ಯಾಯಿಕ ಅಗತ್ಯತೆಗಳನ್ನು ಪೂರೈಸುವುದು.
ಧ್ಯೇಯ:
(1)    ಉತ್ತಮ ಶಾಸನಗಳನ್ನು ಪ್ರಾರೂಪಿಸುವುದು, ಕಾನೂನುಗಳನ್ನು ಅಧಿನಿಯಮಿಸುವುದು, ಅಧ್ಯಾದೇಶಗಳನ್ನು ಪ್ರಖ್ಯಾಪಿಸುವುದು, ಆಧ್ಯಾದೇಶಗಳನ್ನು ವಿಧೇಯಕಗಳಾಗಿ ಮಾರ್ಪಾಡಿಸಿ ಅಧಿನಿಯಮಿಸುವುದು.
(2)    ಸಚಿವಾಲಯದ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ಅಧೀನ ಶಾಸನಗಳನ್ನು ಪರಿಶೀಲಿಸುವುದು.
(3)    ಶಾಸನಗಳನ್ನು ಕನ್ನಡಕ್ಕೆ ಭಾಷಾಂತರಿಸುವುದು.
(4)    ವಿಧಾನ ಮಂಡಲದ ಉಭಯ ಸದನಗಳಲ್ಲಿ ಶಾಸನ ರಚನೆಗೆ ಸಂಬಂಧಿಸಿದ ಹಾಗೂ ಇತರ ಅಧಿಕೃತ ಕಾರ್ಯಕಲಾಪಗಳನ್ನು ಯೋಜಿಸುವುದು ಮತ್ತು ಸಮನ್ವಯಗೊಳಿಸುವುದು.
(5)    ಜಾರಿಯಲ್ಲಿರುವ ಎಲ್ಲಾ ಅಧಿನಿಯಮಗಳನ್ನು ಕ್ರೊಢೀಕರಿಸುವುದು ಮತ್ತು ಮಹತ್ವ ಕಳೆದುಕೊಂಡ ಶಾಸನಗಳನ್ನು ನಿರಸನಗೊಳಿಸುವುದು.
(6)    ಅಧಿನಿಯಮಗಳನ್ನು ಪುಸ್ತಕದ ರೂಪದಲ್ಲಿ ಮತ್ತು ಸಿ.ಡಿ.ರೂಪದಲ್ಲಿ ಪ್ರಕಟಿಸುವುದು.
(7)    ಸಚಿವಾಲಯದ ಎಲ್ಲಾ ಇಲಾಖೆಗಳಿಗೆÀ ಶಾಸನಗಳ ಸಂಬಂಧದಲ್ಲಿ ಕಾರ್ಯವಿಧಾನ ಮತ್ತು ಇತರ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡುವುದು.
(8)    ಜಾರಿಯಲ್ಲಿರುವ ಎಲ್ಲಾ ಅಧಿನಿಯಮಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಗೊಳಿಸುವುದು.
(9)    ಶಾಲಾ ಮಟ್ಟದಲ್ಲಿ ಯುವ ಸಂಸತ್ ಸ್ವರ್ಧೆಗಳನ್ನು ಏರ್ಪಡಿಸುವುದು.
(10)    ಭಾಷಾಂತರ ನಿರ್ದೇಶನಾಲಯದ ಮೂಲಕ ಕೇಂದ್ರ ಮತ್ತು ರಾಜ್ಯ ಅಧಿನಿಯಮಗಳು ಹಾಗೂ ನಿಯಮಗಳನ್ನು ಅಧಿಕೃತ ಭಾಷೆಗೆ ಭಾಷಾಂತರಿಸುವುದು ಮತ್ತು ಸರ್ಕಾರದ ಎಲ್ಲಾ ಇಲಾಖೆಗಳ, ಪ್ರಾಧಿಕಾರಗಳ, ಆಯೋಗಗಳ, ಸಮಿತಿಗಳು ಹಾಗೂ ಮಂಡಳಿಗಳ ಭಾಷಾಂತರ ಕೆಲಸಗಳನ್ನು ಕೈಗೊಳ್ಳುವುದು.


ಉದ್ದೇಶಗಳು:
(1)    ಶಾಸನಾತ್ಮಕ ಕೆಲಸ ಮತ್ತು ಇತರ ವಿಷಯಗಳನ್ನು ವ್ಯವಸ್ಥೆಗೊಳಿಸುವುದು ಮತ್ತು ಸದೃಢÀಗೊಳಿಸುವುದು.
(2)    ಅಧ್ಯಾದೇಶಗಳನ್ನು ಪ್ರಖ್ಯಾಪಿಸುವುದು ಮತ್ತು ಅಧ್ಯಾದೇಶಗಳನ್ನು ವಿಧೇಯಕಗಳಾಗಿ ಮಾರ್ಪಡಿಸಿ ಅಧಿನಿಯಮಿಸುವುದು.
 (3)    ಸಚಿವಾಲಯದ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ಅಧೀನ ಶಾಸನಗಳನ್ನು ಪರಿಶೀಲಿಸುವುದು.
(4)    ವಿಧೇಯಕಗಳನ್ನು ಪ್ರಾರೂಪಿಸುವುದು ಮತ್ತು ಕನ್ನಡಕ್ಕೆ ಭಾಷಾಂತರಿಸುವುದು.
(5)    ಕಾನೂನು ಸಂಪುಟಗಳನ್ನು ಕ್ರೋಢಿಕರಿಸುವುದು, ಎಲ್ಲಾ ಅಧಿನಿಯಮಗಳ ಮಾಸ್ಟರ್ ಪ್ರತಿಗಳನ್ನು ನಿರ್ವಹಿಸುವುದು.
(6)    ಇಂದೀಕರಿಸಿದ ತಿದ್ದುಪಡಿಗಳೊಂದಿಗೆ ರಾಜ್ಯ ಅಧಿನಿಯಮಗಳು ಮತ್ತು ಕೇಂದ್ರ ಅಧಿನಿಯಮಗಳನ್ನು ಪ್ರಕಟಿಸುವುದು ಮತ್ತು ಸಿ.ಡಿ.ಗಳನ್ನು ತಯಾರಿಸಿ ಸರ್ಕಾರಿ ಮುದ್ರಣಾಲಯದ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು.
(7)    ಸಚಿವಾಲಯದ ಎಲ್ಲಾ ಇಲಾಖೆಗಳಿಗೆ ಶಾಸನಗಳಿಗೆ ಸಂಬಂಧಿಸಿದಂತೆ  ಕಾರ್ಯವಿಧಾನ ಮತ್ತು ಇತರ ವಿಷಯಗಳಲ್ಲಿ ಸಲಹೆ ನೀಡುವುದು.
(8)    ಯುವ ಸಂಸತ್ ಸ್ಪರ್ಧೆಯನ್ನು ಪ್ರತಿ ವರ್ಷವು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಡೆಸುವುದು.
(9)    ಶಾಸನಗಳನ್ನು ಕನ್ನಡ ಭಾಷೆಗೆ ಮತ್ತು ಆಂಗ್ಲ ಭಾಷೆಗೆ ಭಾಷಾಂತರಿಸುವ ಕೆಲಸವನ್ನು ಆದ್ಯತೆಯ ಮೇಲೆ ಕೈಗೊಳ್ಳುವುದು.

ಪ್ರಕಾರ್ಯಗಳು:
(1)    ರಾಜ್ಯ ವಿಧಾನಮಂಡಲದ ಸದನಗಳ ಸಭೆಯನ್ನು ಕರೆಯುವುದು ಮತ್ತು ಸಮಾಪನಗೊಳಿಸುವುದು ಹಾಗೂ ವಿಧಾನಸಭೆಯನ್ನು ವಿಸರ್ಜನೆ ಮಾಡುವುದು.
(2)    ವಿಧಾನಮಂಡಲದ ಉಭಯ ಸದನಗಳಲ್ಲಿ ಶಾಸನ ರಚನೆಗೆ ಸಂಬಂಧಿಸಿದ ಹಾಗೂ ಇತರ ಅಧಿಕೃತ ಕಲಾಪಗಳನ್ನು ಯೋಜಿಸುವುದು ಮತ್ತು ಸಮನ್ವಯಗೊಳಿಸುವುದು.
(3)     ಸದಸ್ಯರು ನೀಡಿದ ಸೂಚನೆಗಳ ಚರ್ಚೆಗಾಗಿ ವಿಧಾನ ಮಂಡಲದ ಸದನಗಳಲ್ಲಿ ಸರ್ಕಾರಿ ಸಮಯದ ಹಂಚಿಕೆ ಮಾಡುವುದು.
(4)    ವಿಧಾನಮಂಡಲದ ಸದಸ್ಯರ ಅನೌಪಚಾರಿಕ ಸಮಾಲೋಚನಾ ಸಮಿತಿಗಳನ್ನು ರಚಿಸುವುದು.
(5)    ವಿಧಾನಮಂಡಲದ ಸದಸ್ಯತ್ವಕ್ಕಾಗಿ ಅನರ್ಹತೆಯನ್ನು ನಿವಾರಿಸುವುದು.
(6)    ವಿಧಾನಮಂಡಲದ ಸದಸ್ಯರ ಅಧಿಕಾರಗಳು, ವಿಶೇಷ ಅಧಿಕಾರಗಳು ಮತ್ತು ಉನ್ಮುಕ್ತಿಗಳಿಗೆ ಸಂಬಂಧಿಸಿದ ವಿಷಯಗಳು.
(7)    ಕರ್ನಾಟಕ ರಾಜ್ಯ ಭಾಷಾ (ವಿಧಾಯಿ ಆಯೋಗ)ದ ಮೂಲಕ ಕೇಂದ್ರ ಅಧಿನಿಯಮಗಳು ಮತ್ತು ನಿಯಮಗಳು, ರಾಜ್ಯ ಅಧಿನಿಯಮಗಳು ಮತ್ತು ನಿಯಮಗಳು, ಆಡಳಿತ್ಮಕ ಮತ್ತು ನ್ಯಾಯಿಕ ವಿಷಯಗಳನ್ನು ಕನ್ನಡಕ್ಕೆ ಭಾಷಾಂತರಿಸುವುದು, ಪರಿಶೀಲಿಸುವುದು, ಪರಿಶೋಧಿಸವುದು, ತಾಳೆ ನೋಡುವುದು ಹಾಗೂ ಅಂತಿಮವಾಗಿ ಪರಿಶೋಧಿಸುವುದು ಹಾಗೂ ಅವುಗಳ ಅಧಿಕೃತ ಪಠ್ಯಗಳನ್ನು ತಯಾರಿಸುವುದು.*****

ಇತ್ತೀಚಿನ ನವೀಕರಣ​ : 20-06-2019 01:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080